ಹಾವೇರಿ ಜಿಲ್ಲೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಅಹ್ವಾನ.
ಹಾವೇರಿ ಜಿಲ್ಲೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ತಾಲೂಕು MIS ಸಂಯೋಜಕರು ಮತ್ತು ತಾಲೂಕು ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮಾರ್ಚ್ 8 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಳ್ಳಲಾಗಿದ್ದು, ಪ್ರಕ್ರಿಯೆಯ ಕೊನೆಯ ದಿನಾಂಕ ಮಾರ್ಚ್ 28 2021 ಆಗಿರುತ್ತದೆ.
ಮಾರ್ಚ್ 26 2021 ರಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲನೆ ನಡೆಸಲಾಗುತ್ತದೆ.
ಒಟ್ಟು ಖಾಲಿ ಇರುವ ಹುದ್ದೆಗಳು – 21
ಉದ್ಯೋಗದ ಸ್ಥಳ – ಹಾವೇರಿ
ಬೇಕಾಗಿರುವ ವಿದ್ಯಾರ್ಹತೆ–
೧).ತಾಲೂಕು MIS ಸಂಯೋಜಕರು-
MCA ಅಥವಾ ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಆರ್ ಎಲೆಕ್ಟ್ರಾನಿಕ್
೨). ತಾಲೂಕು ತಾಂತ್ರಿಕ ಸಂಯೋಜಕರು-
ಬಿ.ಇ. ಆರ್ ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್
೩). ತಾಂತ್ರಿಕ ಸಹಾಯಕರು-
ಬಿ.ಇ. ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್
ಮೇಲಿನ ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅನುಭವ-
ಕನಿಷ್ಠ ಮೂರು ವರ್ಷಗಳ ಸೇವಾನುಭವವನ್ನು ಕೇಳಲಾಗಿದೆ.
ವಯೋಮಿತಿ-
45ವರ್ಷದೊಳಗಿನ ವಯೋಮಿತಿ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ವೇತನ-
೧).ತಾಲೂಕು MIS ಸಂಯೋಜಕರು-೧೮,೦೦೦ ರೂ.ಗಳು
೨).ತಾಂತ್ರಿಕ ಸಂಯೋಜಕರು- ೨೯,೦೦೦ರೂ.ಗಳು
೩). ತಾಂತ್ರಿಕ ಸಹಾಯಕ- ೧೯,೦೦೦ ರೂ.ಗಳು
ಆಯ್ಕೆ ವಿಧಾನಗಳು-
ಆಯಾ ಹುದ್ದೆಗಳಿಗೆ ಅನುಗುಣವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿ ಆಯ್ಕೆ ಮಾಡಲಾಗುವುದು.
ಪ್ರಾರಂಭ ದಿನಾಂಕ – ೮-೩-೨೦೨೧
ಕೊನೆಯ ದಿನಾಂಕ – ೨೨-೩-೨೦೨೧