ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸ್ ಆದವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯಲ್ಲಿ ಉದ್ಯೋಗವಕಾಶ
ಖಾಲಿ ಇರುವ ಒಟ್ಟು 45 ಹುದ್ದೆಗಳಿಗೆ ಆನಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಇಲ್ಲಿ ಹುದ್ದೆಗಳು ಖಾಲಿಯಾಗಿವೆ. ಆಸಕ್ತ ಅಭ್ಯರ್ಥಿಗಳು ಆನಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈ ಅರ್ಜಿಗಳನ್ನು ದಿನಾಂಕ 5-3-2021 ರಿಂದ ದಿನಾಂಕ 5-4-2021 ರವರೆಗೆ ಸಲ್ಲಿಸಬಹುದಾಗಿದೆ.
ಹುದ್ದೆಗಳು ಮತ್ತು ಇರಬೇಕಾದ ಅರ್ಹತೆ
1).ಅಕೌಂಟೆಂಟ್-೦5
ಭಾರತ ಸರ್ಕಾರ ದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಕಾಮ್ ನಲ್ಲಿ ಸಹಕಾರ ನಿರ್ವಹಣೆ ಪದವೀಧರ ನಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಟ್ಯಾಲಿ ಕೊರ್ಸಿನಲ್ಲಿ ತೇರ್ಗಡೆ ಹೊಂದಿದ ಪ್ರಮಾಣೀಕೃತ ಪತ್ರ ಇರಬೇಕು
2).ಪ್ರಥಮ ದರ್ಜೆ ಗುಮಾಸ್ತ- 1೦
ಭಾರತ ಸರ್ಕಾರ ದಿಂದ ಮಾನ್ಯತೆ ಪಡೆದ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿಯನ್ನು ಪಡೆದಿರಬೇಕು. ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
3).ವಿಕ್ರಯ ಸಹಾಯಕರು-1೦
ದ್ವಿತೀಯ ಪಿಯುಸಿ ಯಲ್ಲಿ ಉತ್ತೀರ್ಣರಾಗಿರಬೇಕು
4).ಟೈಪಿಸ್ಟ್- ೦8
ದ್ವೀತಿಯ ಪಿಯುಸಿ ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಮೂರು ವರ್ಷದ ಕೊರ್ಸಿನಲ್ಲಿ ಉತ್ತೀರ್ಣರಾಗಿರಬೇಕು. ಸಿನೀಯರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಉತ್ತೀರ್ಣರಾಗಿರಬೇಕು. ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
5).ಜವಾನ-1೦
ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು.
6).ಕಿರಿಯ ಫಾರ್ಮಾಸಿಸ್ಟ್-೦2
ಕಂಪ್ಯೂಟರ್ ಜ್ಞಾನದ ಜೊತೆಗೆ ಡಿಪ್ಲೊಮಾ ಇನ್ ಫಾರ್ಮಾಸಿಸ್ ಪಾಸ್ ಆಗಿರಬೇಕು
ಈ ಮೇಲಿನ ಎಲ್ಲ ಹುದ್ದೆಗಳಿಗೆ ಕನ್ನಡದಲ್ಲಿ ಓದಲು, ಬರೆಯಲು, ಸ್ಪಷ್ಟವಾಗಿ ಮಾತನಾಡಲು ಬರುತ್ತಿಬೇಕು.
ಕಾರ್ಯಸ್ಥಳ- ಕರ್ನಾಟಕದ ಶಾಖೆಗಳು
ವಯಸ್ಸು-
ಪ.ಜಾ ಪ.ಪಂ ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಟ 40 ವರ್ಷದ ಒಳಗೆ ಇರಬೇಕು.
ಪ್ರವರ್ಗ-2ಎ 2ಬಿ 3ಎ 3ಬಿ ಅಭ್ಯರ್ಥಿಗಳು ಕನಿಷ್ಠ 18ರಿಂದ ಗರಿಷ್ಠ 38ವರ್ಷ
ಸಾಮಾನ್ಯ ವರ್ಗ ಕನಿಷ್ಠ 18ರಿಂದ ಗರಿಷ್ಠ 35ವರ್ಷ
ಅರ್ಜಿ ಶುಲ್ಕ-
ಅಂಗವಿಕಲರಿಗೆ, ಪ.ಜಾ. ಮತ್ತು ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 5೦೦ರೂ.ಗಳು +ಅಂಚೆಕಛೇರಿ ಶುಲ್ಕ 3೦ರೂ.
ಇತರೆ ವರ್ಗದ ಅಭ್ಯರ್ಥಿಗಳಿಗೆ 1೦೦೦ರೂ.ಗಳು +ಅಂಚೆಕಛೇರಿ ಶುಲ್ಕ 3೦ರೂ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ- 5-3-2021
ಕೊನೆಯ ದಿನಾಂಕ 5-4-2021
ಶುಲ್ಕ ಕಟ್ಟಲು ಕೊನೆಯ ದಿನಾಂಕ 6-4-2021
ಅರ್ಜಿ ಸಲ್ಲಿಸುವ ಲಿಂಕ್-
http://recruitapp.in/ksccf2021/