JOB NEWS| ಅಂಗನವಾಡಿ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ೬ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ಗೌರವ ಸೇವೆಗಳ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ- 17ಹುದ್ದೆಗಳು, ಅಂಗನವಾಡಿ ಸಹಾಯಕಿಯರು-73 ಹುದ್ದೆಗಳು.‌ ಒಟ್ಟು 90 ಖಾಲಿ ಇದ್ದು ಚಿಕ್ಕಬಳ್ಳಾಪುರ ಜಿಲ್ಲೆ ಉದ್ಯೋಗ ಸ್ಥಳವಾಗಿದೆ.

ಆಯ್ಕೆ ಹೇಗೆ?
ಹುದ್ದೆ ಖಾಲಿ ಇರುವ ಯಾವುದೇ ಅಂಗನವಾಡಿಯಲ್ಲಿ ಸಹಾಯಕಿರಾಗಿ ಈಗಾಗಲೇ ಕನಿಷ್ಟ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೆ, SSLC ಪಾಸಾಗಿದ್ದರೆ, ಕನಿಷ್ಟ 45 ವರ್ಷಗಳಗಿಂತ ಕೆಳಗಿದ್ದರೆ, ಅಂಗನವಾಡಿ ಕೇಂದ್ರ ವಿರುವ ಗ್ರಾಮದಲ್ಲಿ ವಾಸವಾಗಿದ್ದರೆ, ಕನಿಷ್ಠ ಮೂರು ಕಿ.ಮಿ. ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ಅಂತಹ ಮಹಿಳಾ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಅಂತಹವರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಹಾಯಕಿಯನ್ನೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಮಾರ್ಚ್ 20 2021 ಅರ್ಜಿಗಳನ್ನು ಸಲ್ಲಿಸಲು ಪ್ರಾರಂದ ದಿನವಾಗಿದ್ದು, ಏಪ್ರಿಲ್ 21 2021 ಕೊನೆಯ ದಿನಾಂಕ ವಾಗಿದೆ.

 

ವಿದ್ಯಾರ್ಹತೆ-
ಅಂಗನವಾಡಿ ಕಾರ್ಯಕರ್ತೆ- SSLC ಪಾಸ್ ಆಗಿರಬೇಕು

ಅಂಗನವಾಡಿ ಸಹಾಯಕಿಯರು- ಕನಿಷ್ಟ 4ನೇಯ ತರಗತಿ ಪಾಸಾಗಿರಬೇಕು. ಗರಿಷ್ಠ 9ನೇಯ ತರಗತಿ ಕೇಳಲಾಗಿದೆ. 9 ನೇಯ ತರಗತಿ ಮೇಲೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ

ವಯೋಮಿತಿ- 18-35 ವರ್ಷ ದೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

Leave A Reply

Your email address will not be published.