ಭಾರತೀಯ ಸೇನಾ ನೇಮಕಾತಿ 2021

0

ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮೇ 7ರಿಂದ 12ರವರೆಗೆ ಭಾರತೀಯ ಸೇನೆಯ ನೇಮಕಾತಿ ಮೇಳ ನಡೆಯಲಿದೆ. ಇದರಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಸೇನೆಯ ನೇಮಕಾತಿ ಮೇಳದಲ್ಲಿ ಆರು ರೀತಿಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಭಾಗವಹಿಸಲು ಆನ್‌ಲೈನ್‌ ನೋಂದಾವಣಿ ಕಡ್ಡಾಯವಾಗಿದೆ. ಏಪ್ರಿಲ್‌ 26ರವರೆಗೆ ನೋಂದಾವಣಿಗೆ ಅವಕಾಶವಿದೆ. ಮೇಳ ಆರಂಭವಾಗುವದಕ್ಕಿಂತ 10 ದಿನ ಮೊದಲೇ ನೋಂದಾಯಿತ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಇಮೇಲ್‌ ಮೂಲಕ ಕಳುಹಿಸಲಾಗುತ್ತದೆ ಎಂದು ಸೇನೆ ತಿಳಿಸಿದೆ.

ಸೇನೆಯ ಜನರಲ್‌ ಡ್ಯೂಟಿ, ತಾಂತ್ರಿಕ ಸೇವೆ, ಟ್ರೇಡ್ಸ್‌ಮೆನ್‌, ಕ್ಲರ್ಕ್‌, ಸ್ಟೋರ್‌ ಕೀಪರ್‌, ನರ್ಸಿಂಗ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಎಲ್ಲಾ ಹುದ್ದೆಗಳಿಗೂ ವಯೋಮಿತಿಯು ಕನಿಷ್ಠ 17.5 ವರ್ಷ ಹಾಗೂ ಗರಿಷ್ಠ 21 ವರ್ಷ. ಅಂದರೆ ಅಕ್ಟೋಬರ್‌ 1, 2000 ಹಾಗೂ ಏಪ್ರಿಲ್‌ 1, 2004ರ ನಡುವೆ ಜನಿಸಿದವರು ಮೇಳದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಯ ಕನಿಷ್ಠ ಎತ್ತರ, ತೂಕ, ಎದೆಯ ಅಗಲವನ್ನು ಸೇನೆಯು ನಿಗದಿಪಡಿಸಿದೆ.

ಆಸಕ್ತರು ನೋಟಿಫಿಕೇಷನ್‌ನಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.

NOTIFICATION

ARMY WEBSITE

Leave A Reply

Your email address will not be published.