ವೇತನ 12000-24000: ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಗಳನ್ನು ಅಹ್ವಾನಿಸಲಾಗಿದೆ

0

ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಗಳನ್ನು ಅಹ್ವಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊರಗುತ್ತಿಗೆ ಸಂಸ್ಥೆಯಾದ ಮೇಘ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಅರ್ಜಿ ಆಹ್ವಾನಿಸಿದೆ. ನಾನಾ ಹುದ್ದೆಗಳಿಗೆ 12,000ದಿಂದ 24,000 ರೂ. ತನಕ ವೇತನ ನಿಗದಿಪಡಿಸಲಾಗಿದ್ದು, ಪ್ರಯಾಣ ಭತ್ಯೆ (ಟಿಎ) ಕೂಡ ನೀಡಲಾಗುತ್ತದೆ.

ಯಾವ್ಯಾವ ಹುದ್ದೆ?
1. ಜಿಲ್ಲಾ ಐಇಸಿ ಸಂಯೋಜಕರು (DIEC)
ಅನುಭವ: ಕನಿಷ್ಠ 3 ವರ್ಷ
ಸಂಬಳ: 23,000 ರೂ. ಹಾಗೂ ಟಿಎ 2,000 ರೂ.
ಹುದ್ದೆಗಳು: 1

2. ತಾಲೂಕು ಐಇಸಿ ಸಂಯೋಜಕರು (TIEC)
ಅನುಭವ: ಕನಿಷ್ಠ 2 ವರ್ಷ
ಸಂಬಳ: 18,000 ರೂ. ಹಾಗೂ ಟಿಎ 2,000 ರೂ.
ಹುದ್ದೆಗಳು: 2

3. ತಾಂತ್ರಿಕ ಸಹಾಯಕರು – ಅರಣ್ಯ (TAF)
ಸಂಬಳ: 24,000 ರೂ. ಹಾಗೂ ಟಿಎ 1,5000 ರೂ.
ಹುದ್ದೆಗಳು: 1

4. ತಾಂತ್ರಿಕ ಸಹಾಯಕರು – ತೋಟಗಾರಿಕೆ (TAH)
ಸಂಬಳ: 24,000 ರೂ. ಹಾಗೂ ಟಿಎ 1,5000 ರೂ.
ಹುದ್ದೆಗಳು: 2

5. ಬೇರ್‌ ಫುಟ್‌ ಟೆಕ್ನಿಷಿಯನ್‌ (BFT)
ಸಂಬಳ: 12,000 ರೂ.
ಹುದ್ದೆಗಳು: 7

ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಅರ್ಜಿಯನ್ನು ಪಡೆದು, ಅಲ್ಲಿಯೇ ಸಲ್ಲಿಸಬಹುದು. ಅರ್ಜಿಯ ಶುಲ್ಕ 100 ರೂ. ಆಗಿದ್ದು, ಅರ್ಜಿ ಸಲ್ಲಿಸಲು 6.04.2021 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ 08272-228901 ಸಂಖ್ಯೆಗೆ ಕರೆ ಮಾಡಬಹುದು.

NOTIFICATION

WEBSITE

Leave A Reply

Your email address will not be published.