ಎಸ್ಸೆಸ್ಸೆಲ್ಸಿ ಪಾಸದವರಿಗೆ ರೈಲ್ವೆ ಇಲಾಖೆಯಲ್ಲಿವೆ 480 ಹುದ್ದೆಗಳು

0

ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು, ಉತ್ತರ ಮಧ್ಯ ರೈಲ್ವೆ (NCR) ವಿಭಾಗದ ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಮಾರ್ಚ್‌ 17ರಿಂದಲೇ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಏಪ್ರಿಲ್‌ 16 ಅಂತಿಮ ದಿನ. 286 ಫಿಟ್ಟರ್, 11 ವೆಲ್ಡರ್, 84 ಮೆಕಾನಿಕ್, 11 ಕಾರ್ಪೆಂಟರ್, 88 ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅಥವಾ ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.

ನೇಮಕಾತಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ 100 ರೂ. ಅರ್ಜಿ ಶುಲ್ಕ ಮತ್ತು 70 ರೂ. ಪೋರ್ಟಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಉತ್ತರ ಮಧ್ಯ ರೈಲ್ವೆ (NCR) ವೆಬ್‌ಸೈಟ್‌ ncr.indianrailway.gov.in ನಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ, ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅಂಚೆ ಮೂಲಕವೂ ತಿಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ ಮಂಡಳಿಯಿಂದ ಸ್ಟೈಫಂಡ್ ಸೌಲಭ್ಯವಿದೆ.

ಎನ್‌ಸಿಆರ್‌ನ ವೆಬ್‌ಸೈಟ್‌ ncr.indianrailway.gov.in ಹಾಗೂ ಮಧ್ಯಪ್ರದೇಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ mponline.gov.in ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

Leave A Reply

Your email address will not be published.