402 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ: ಕಲ್ಯಾಣ ಕರ್ನಾಟಕಕ್ಕೆ 26 ಮೀಸಲು..!

0

ಖಾಲಿಯಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್‌) ಹುದ್ದೆಗಳ ಭರ್ತಿಗೆ ಕರ್ನಾಟಕ ಪೊಲೀಸ್‌ ಇಲಾಖೆ ಮುಂದಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶವರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮೇ 3ರ ತನಕ ಅವಕಾಶವಿದೆ. ಅರ್ಜಿ ಶುಲ್ಕವನ್ನು ಪಾವತಿಸಲು ಮೇ 5ರ ಅಂತಿಮ ದಿನ. ಸಾಮಾನ್ಯ ಕೆಟಗರಿ ಹಾಗೂ ಒಬಿಸಿ ಅಭ್ಯರ್ಥಿಗಳು 500 ರೂ. ಮತ್ತು ಎಸ್‌ಸಿ, ಎಸ್‌ಟಿ, ಕೆಟಗರಿ-1ರ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಕೆಟಗರಿಯವರಿಗೆ 21ರಿಂದ 30 ವರ್ಷ ಹಾಗೂ ಇತರೆ ಕೆಟಗರಿಗಳಿಗೆ 21ರಿಂದ 32 ವರ್ಷಗಳ ತನಕವೆಂದು ವಯೋಮಿತಿ ನಿಗದಿಪಡಿಸಲಾಗಿದೆ. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಪಿಸಿ, ಎಚ್‌ಸಿ, ಎಎಸ್‌ಐ ಹುದ್ದೆಗಳಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವವರಿಗೆ ವಯೋಮಿತಿ ವಿಭಿನ್ನವಾಗಿದೆ. ಅವರು ಸಾಮಾನ್ಯ ಕೆಟಗರಿಯವರಾಗಿದ್ದರೆ 35 ವರ್ಷದವರೆಗೆ ಹಾಗೂ ಇತರೆ ಕೆಟಗರಿಯವರಾಗಿದ್ದರೆ 40 ವರ್ಷದವರೆಗೆ ವಯೋಮಿತಿ ನಿಗದಿಯಾಗಿದೆ.

ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಕೋರ್ಸ್‌ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರು. ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳು ಮೊದಲು ಸಹಿಷ್ಣೆತೆ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಎದುರಿಸಿ, ನಂತರ ಲಿಖಿತ ಪರೀಕ್ಷೆಯನ್ನು ಬರೆಯಬೇಕಿದೆ. ಒಟ್ಟು 402ಗಳ ಪೈಕಿ 26 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿದೆ. ಉಳಿದ 376 ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದವರೂ ಸೇರಿದಂತೆ ಯಾವುದೇ ಪ್ರದೇಶದವರು ಅರ್ಜಿ ಸಲ್ಲಿಸಬಹುದು.

 

Click it Apply ONLINE

 

___________

Leave A Reply

Your email address will not be published.