ವಾಯುಪಡೆಯಲ್ಲಿ 1515 ಉದ್ಯೋಗಾವಕಾಶ: 25 ವರ್ಷದೊಳಗಿನವರಿಗೆ ಆಹ್ವಾನ..!

0

ಪ್ರಸ್ತುತ ಖಾಲಿಯಿರುವ 1515 ಗ್ರೂಪ್‌-ಸಿ ಸಿವಿಲಿಯನ್‌ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ವಾಯುಪಡೆ ಮುಂದಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಏಪ್ರಿಲ್‌ 3, 2021ರಂದು ವಾಯುಪಡೆಯು ಈ ಸಂಬಂಧ ನೋಟಿಫಿಕೇಶನ್‌ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಅಂದಿನಿಂದ 30 ದಿನಗಳ ಕಾಲಾವಕಾಶ ನೀಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸೀನಿಯರ್‌ ಕಂಪ್ಯೂಟರ್‌ ಆಪರೇಟರ್‌ 2, ಸುಪರಿಂಟೆಂಡೆಂಟ್‌ 66, ಸ್ಟೆನೋಗ್ರಾಫರ್‌ ಗ್ರೇಡ್‌-2 39, ಎಲ್‌ಡಿಸಿ 53, ಹಿಂದಿ ಟೈಪಿಸ್ಟ್‌ 12, ಸ್ಟೋರ್‌ ಕೀಪರ್‌ 15 ಹುದ್ದೆಗಳು ಸೇರಿದಂತೆ ಒಟ್ಟು 29 ರೀತಿಯ 1515 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಶ್ರೇಣಿಯ ಹುದ್ದೆಗೂ ಬೇರೆಬೇರೆ ರೀತಿಯ ಶೈಕ್ಷಣಿಕ ಅರ್ಹತೆ, ಮೀಸಲಾತಿ ಪ್ರಮಾಣ ನಿಗದಿಯಾಗಿದೆ.

ಎಲ್ಲಾ ಹುದ್ದೆಗಳಿಗೂ 18ರಿಂದ 25 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಯು ಸ್ವೀಕೃತಗೊಂಡರೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕು. ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಪ್ರಶ್ನೆ ಪತ್ರಿಕೆ ಇರಲಿದೆ.

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವಾಯುಪಡೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

AIRFORCE WEBSITE

Leave A Reply

Your email address will not be published.