ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ-2021; Scientific Officers Posts.

0

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯ / ಪ್ರಾದೇಶಿಕ ನ್ಯಾಯ ವಿಜ್ಞಾನ ಘಟಕ, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 7 ಜೂನ್ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7 ಜುಲೈ 2021 ಶುಲ್ಕ ಪಾವತಿಸಲು ಕೊನೆಯ ದಿನಾಂಕ: 9 ಜುಲೈ 2021

ಹುದ್ದೆಗಳ ವಿವರ

ಜೀವಶಾಸ್ತ್ರ ವಿಭಾಗ – 12

ರಸಾಯನಶಾಸ್ತ್ರ ವಿಭಾಗ – 08

ನಾರ್ ಕೋಟಿಕ್ಸ್ ವಿಭಾಗ – 02

ಭೌತಶಾಸ್ತ್ರ ವಿಭಾಗ – 05

ಡಿಎನ್ ಎ ವಿಭಾಗ – 02

ಪ್ರಶ್ನಿತ ದಾಸ್ತಾವೇಜು ವಿಭಾಗ – 10

ಅಗ್ನಿ ಅಸ್ತ್ರ ವಿಭಾಗ – 06

ಫೋರೆನಿಕ್ಸ್ ಮನೋವಿಜ್ಞಾನ – 01

ಕಂಪ್ಯೂಟರ್ ಫೋರೆನಿಕ್ಸ್ ವಿಭಾಗ – 05

ಮೊಬೈಲ್ ಫೋರೆನಿಕ್ಸ್ ವಿಭಾಗ – 05

ಆಡಿಯೋ ವಿಡಿಯೋ ವಿಭಾಗ – 05

ವಿಷ ವಿಜ್ಞಾನ ವಿಭಾಗ – 21

ಫೋಟೋಗ್ರಫಿ ವಿಭಾಗ – 02

ಒಟ್ಟು ಹುದ್ದೆಗಳು: 84 ಉದ್ಯೋಗ ಸ್ಥಳ: ಕರ್ನಾಟಕ

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ 250 (ಪ್ರತಿ ವಿಭಾಗಕ್ಕೆ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 100 (ಪ್ರತಿ ವಿಭಾಗಕ್ಕೆ) ಅರ್ಜಿಯ ಶುಲ್ಕವನ್ನು ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ : ರೂ 40900-1100-46400-1250-53900 1450-62600-1650-72500-1900-78200.

ಆಯ್ಕೆ ವಿಧಾನ:

ಅರ್ಹ ಅಭ್ಯರ್ಥಿಗಳಿಗೆ 150 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಎರಡು ಪತ್ರಿಕೆಗಳನ್ನೊಳಗೊಂಡ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಸ್ಯಶಾಸ್ತ್ರ | ಪ್ರಾಣಿಶಾಸ್ತ್ರ / ಜೀವ ರಸಾಯನಶಾಸ್ತ್ರ / ಸೂಕ್ಷ್ಮಜೀವ ವಿಜ್ಞಾನ / ಜೀವವಿಜ್ಞಾನ / ವಿಧಿವಿಜ್ಞಾನ / ಔಷದ ಶಾಸ್ತ್ರ / ಭೌತಶಾಸ್ತ್ರ | ಗಣಕ ವಿಜ್ಞಾನ / ವಿದ್ಯುನ್ಮಾನ /ಮಾಹಿತಿ ವಿಜ್ಞಾನ / ತಂತ್ರಜ್ಞಾನದಲ್ಲಿ ಪದವಿಯನ್ನು ಹೊಂದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ 07-07-2021 ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸನ್ನು ಹೊಂದಿರಬೇಕು. ಗರಿಷ್ಟ ಕೆಳಕಂಡ ವಯಸ್ಸನ್ನು ಮೀರಿರಬಾರದು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ.

Click here👇

Apply ONLINE

Leave A Reply

Your email address will not be published.