Indian Railways Recruitment 2021: ರೈಲ್ವೇ ಇಲಾಖೆಯ 3591 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!

1

ಪಶ್ಚಿಮ ರೈಲು ವಿಭಾಗದ ರೈಲ್ವೇ ನೇಮಕಾತಿ ವಿಭಾಗ 3,591 ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳಿಗೆ ನೇಮಕಾತಿ ಆರಂಭವಾಗಿದ್ದು, ಜೂನ್ 24 ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಯನ್ನು www.rrc-wr.com ಮೂಲಕ ದಾಖಲಿಸಬಹುದು. ಇದು ನೇರ ನೇಮಕಾತಿ ಪ್ರಕ್ರಿಯೆಯಾಗಿದ್ದು ಸಂಬಂಧಪಟ್ಟ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ.

ಇದು ನೇರ ನೇಮಕಾತಿ ಪ್ರಕ್ರಿಯೆಯಾಗಿದ್ದು ಸಂಬಂಧಪಟ್ಟ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ.

ನೇಮಕಾತಿ ಪ್ರಕ್ರಿಯೆ ಮೆರಿಟ್ ಲಿಸ್ಟ್ ಆಧಾರದಲ್ಲಿ ನಡೆಯಲಿದೆ. ಮೆರಿಟ್ ಲಿಸ್ಟ್ 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕದ ಆಧಾರದ ಮೇಲೆ ತಯಾರಿಸಲಾಗುತ್ತದೆ. ಒಂದು ವೇಳೆ ಇಬ್ಬರು ವಿದ್ಯಾರ್ಥಿಗಳ ಸರಾಸರಿ ಅಂಕವು ಒಂದೇ ರೀತಿ ಕಂಡುಬಂದರೆ ಅಂತಹ ವಿದ್ಯಾರ್ಥಿಗಳಲ್ಲಿ ಯಾರು ವಯಸ್ಸಿನಲ್ಲಿ ಹಿರಿಯರೋ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ರೈಲ್ವೇ ನೇಮಕಾತಿ 2021ರ (Indian Railways Recruitment 2021) ಶುಲ್ಕ

ಯಾರು ಮೀಸಲಾತಿ ವರ್ಗಕ್ಕೆ ಸೇರುವುದಿಲ್ಲವೋ ಅಂತಹ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು 100 ರೂಪಾಯಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳು ಕೂಡ ಯಾವುದೇ ಶುಲ್ಕ ಪಾವತಿಸಬೇಕು ಎಂದಿಲ್ಲ.

ರೈಲ್ವೇ ನೇಮಕಾತಿ 2021ರ (Indian Railways Recruitment 2021) ವಯೋಮಿತಿ

ಮೀಸಲಾತಿ ವರ್ಗಕ್ಕೆ ಸೇರದ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿ ಇರಬೇಕು. ಮತ್ತು 24 ವರ್ಷಕ್ಕಿಂತ ಒಳಗಿನ ಅಭ್ಯರ್ಥಿಗಳಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುವ ಅಭ್ಯರ್ಥಿಗಳ ಗರಿಷ್ಠ ವಯೋಮಾನ ಮಿತಿ 5 ವರ್ಷ ಹೆಚ್ಚಾಗಿದ್ದರೂ ಭಾಗವಹಿಸಬಹುದು. ಉಳಿದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಾನ ಮಿತಿಯಲ್ಲಿ 3 ವರ್ಷಗಳ ವಿನಾಯಿತಿ ನೀಡಲಾಗಿದೆ.

ರೈಲ್ವೇ ನೇಮಕಾತಿ ವಿವರ

ಮುಂಬೈ ವಿಭಾಗ (ಎಮ್‌ಎಮ್‌ಸಿಟಿ) – 738 ವಡೋದರಾ ವಿಭಾಗ (ಬಿಆರ್‌ಸಿ) – 489 ಅಹಮದಾಬಾದ್ ವಿಭಾಗ (ಎಡಿಐ) – 611 ರತ್ಲಮ್ ವಿಭಾಗ (ಆರ್‌ಟಿಎಮ್) – 434 ರಾಜ್‌ಕೋಟ್ ವಿಭಾಗ (ಆರ್‌ಜೆಟಿ) – 176 ಭಾವ್ನಗರ್ ವರ್ಕ್‌ಶಾಪ್ (ಬಿವಿಪಿ) – 210 ಲೋವರ್ ಪರೇಲ್ ವರ್ಕ್‌ಶಾಪ್ (ಪಿಎಲ್) – 396 ಮಹಾಲಕ್ಷ್ಮೀ ವರ್ಕ್‌ಶಾಪ್ (ಎಮ್‌ಎಕ್ಸ್) – 64 ದಾಹೊದ್ ವರ್ಕ್‌ಶಾಪ್ (ಡಿಹೆಚ್‌ಡಿ) – 187 ಪ್ರತಾಪ್ ನಗರ್ ವರ್ಕ್‌ಶಾಪ್ (ಪಿಆರ್‌ಟಿಎನ್) – 45 ಸಾಬರ್‌ಮತಿ ವರ್ಕ್‌ಶಾಪ್ (ಎಸ್‌ಬಿಐ) – 60 ಸಾಬರ್‌ಮತಿ ಸಿಗ್ನಲ್ ವರ್ಕ್‌ಶಾಪ್ (ಎಸ್‌ಬಿಐ) – 25

ಪ್ರಧಾನ ಕಚೇರಿ – 34

ಅಹಮದಾಬಾದ್ ವಿಭಾಗ (ಎಡಿಐ) – 611

ರತ್ಲಮ್ ವಿಭಾಗ (ಆರ್‌ಟಿಎಮ್) – 434 ರಾಜ್‌ಕೋಟ್ ವಿಭಾಗ (ಆರ್‌ಜೆಟಿ) – 176 ಭಾವ್ನಗರ್ ವರ್ಕ್‌ಶಾಪ್ (ಬಿವಿಪಿ) – 210 ಲೋವರ್ ಪರೇಲ್ ವರ್ಕ್‌ಶಾಪ್ (ಪಿಎಲ್) – 396 ಮಹಾಲಕ್ಷ್ಮೀ ವರ್ಕ್‌ಶಾಪ್ (ಎನ್ಎಕ್ಸ್) – 64 ದಾಹೊದ್ ವರ್ಕ್‌ಶಾಪ್ (ಡಿಹೆಚ್‌ಡಿ) -187 ಪ್ರತಾಪ್ ನಗರ್ ವರ್ಕ್ಶಾಪ್ (ಪಿಆರ್‌ಟಿಎನ್) – 45 ಸಾಬರ್‌ಮತಿ ವರ್ಕ್‌ಶಾಪ್ (ಎಸ್‌ಬಿಐ) – 60 ಸಾಬರ್‌ಮತಿ ಸಿಗ್ನಲ್ ವರ್ಕ್‌ಶಾಪ್ (ಎಸ್‌ಬಿಐ) – 25 ಪ್ರಧಾನ ಕಚೇರಿ – 34

ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ.?

ನಿಮಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇದ್ದು ಹಾಗೂ ನೀವು ಈ ಹುದ್ದೆಗೆ ಅರ್ಹ ಅಭ್ಯರ್ಥಿಯಾಗಿದ್ದರೆ ಹೀಗೆ ಮಾಡಿ

Apply ONLINE

– ಅಪ್ಲಿಕೇಷನ್‌ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ – ಹೊಸ ಪುಟದಲ್ಲಿ ಅರ್ಜಿ ತುಂಬುವ ಫಾರ್ಮ್ ತೆರೆದುಕೊಳ್ಳುತ್ತದೆ.

– ಅರ್ಜಿ ತುಂಬಿದ ನಂತರ, ನಿಮ್ಮ ಫೀಸ್ ತುಂಬಿರಿ – ಅರ್ಜಿ ಸಲ್ಲಿಸಿದ ದಾಖಲೆಗಳನ್ನು, ಇತರ ಅಗತ್ಯ ಮಾಹಿತಿಗಳನ್ನು ತೆಗೆದಿಟ್ಟುಕೊಳ್ಳಿ

1 Comment
  1. Basavaraj balappa kappali says

    Kk

Leave A Reply

Your email address will not be published.