ಡೇಟಾ ಎಂಟ್ರಿ ಆಪರೇಟರ್ ಮತ್ತು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ.

1

ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯವಿರುವ ಸಿಬ್ಬಂದಿಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಇಂಟರ್ವ್ಯೂ ಪ್ರಕ್ರಿಯೆ ಮೂಲಕ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2021 – 78 ವಿವಿಧ ಹುದ್ದೆಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇಲ್ಲಿ ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯವಿರುವ ಅಧಿಕಾರಿ / ಸಿಬ್ಬಂದಿಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. 03 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಇಂಟರ್ವ್ಯೂ ಪ್ರಕ್ರಿಯೆ ಮೂಲಕ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ.

ಹುದ್ದೆಯ ಹೆಸರು

ಅರಿವಳಿಕೆ ತಜ್ಞ 4

ಜನರಲ್ ಫಿಸಿಶಿಯನ್ 3

ಎಂಬಿಬಿಎಸ್ ಡಾಕ್ಟರ್ಸ್ 20

ಸ್ಟಾಫ್ ನರ್ಸ್ 40

ಉಸಿರಾಟದ ಚಿಕಿತ್ಸಕ 3

ಡಾಟಾ ಎಂಟ್ರಿ ಆಪರೇಟರ್3

ಲ್ಯಾಬ್ ಟೆಕ್ನಿಷಿಯನ್ 3

ಫಾರ್ಮಾಸಿಸ್ಟ್ 2

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್ / ಪದವಿ / ಡಿಪ್ಲೊಮ /ಡಿ ಫಾರ್ಮ/ಬಿ ಫಾರ್ಮಾ / ಎಂ ಫಾರ್ಮಾ ಉತ್ತೀರ್ಣರಾಗಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳೊಂದಿಗೆ ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.

ವಿಳಾಸ: ದಿನಾಂಕ 05-06-2021 ರ ಶನಿವಾರ ಸಂದರ್ಶನವನ್ನು ವಿಳಾಸ – ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್, 1ನೇ ಮಹಡಿ, ಟೌನ್ ಹಾಲ್ ಹತ್ತಿರ, ಸಮಯ 10 ಗಂಟೆ ಇಂದ ಸಂಜೆ 4-30 ಗಂಟೆವರೆಗೆ ನಡೆಸಲಾಗುತ್ತದೆ.

ಇತರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-22975766

1 Comment
  1. Shashi kammar says

    Thankyou

Leave A Reply

Your email address will not be published.