ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೇಮಕಾತಿ 2021; ಕಂಪ್ಯೂಟರ್ ಆಪರೇಟರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

0

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ  ಕಾರ್ಯಾಲಯದಲ್ಲಿ ಮಂಜೂರಾಗಿ ತೆರವಾಗಿರುವ ಹುದ್ದೆಗಳಿಗೆ ನಿವೃತ್ತ ನೌಕರ/ಸಿಬ್ಬಂದಿಯವರನ್ನು ಹೊರಗುತ್ತಿಗೆ / ಗೌರವಧನ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಜೂನ್ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3 ಜುಲೈ 2021

ಹುದ್ದೆಗಳ ವಿವರ:

ಕಾರ್ಯ ನಿರ್ವಾಹಕ ಅಭಿಯಂತರರು: 01
ಸಹಾಯಕ ಅಭಿಯಂತರರು, ಜೂನಿಯರ್:05 ಜೂನಿಯರ್ ಪ್ರೋಗ್ರಾಮರ್: 02
ಕಂಪ್ಯೂಟರ್ ಆಪರೇಟರ್: 02

ಒಟ್ಟು ಹುದ್ದೆಗಳು: 10

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನಶ್ರೇಣಿ:

-ಸಂಭಾವನೆ ಕನಿಷ್ಠ ವೇತನ ಕಾಯ್ದೆ ಅನ್ವಯ.

ವಿದ್ಯಾರ್ಹತೆ:

ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರ ಹುದ್ದೆಗಳು: PWD, PRED, MI, RWS,

KUWS&DB, KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಹಾಯಕ ಕಾರ್ಯನಿರ್ವಹಾಕ ಅಭಿಯಂತರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಪ್ರೋಗ್ರಾಮರ್ ಹುದ್ದೆ : ಎಂಎಸ್ಸಿ / ಎಂಎಸ್ಸಿ (ಸಿಎಸ್) ವಿದ್ಯಾರ್ಹತೆ ಜತೆಗೆ ಕನಿಷ್ಠ 2 ವರ್ಷ ಕಾರ್ಯಾನುಭವ ಹೊಂದಿರಬೇಕು.

ಕಂಪ್ಯೂಟರ್ ಆಪರೇಟರ್ ಹುದ್ದೆ : ಯಾವುದೇ ಪದವಿ ಪಾಸ್ ಮಾಡಿರಬೇಕು. ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ತಿಳಿದಿರಬೇಕು. ಸರ್ಕಾರದ ಯಾವುದೇ ಕಚೇರಿಯಲ್ಲಿ ಒಂದು ವರ್ಷ ಕರ್ತವ್ಯ ನಿರ್ವಹಿಸಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಮೇಲಿನ ಹುದ್ದೆಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು ವಿಳಾಸ – ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಅಭಿವೃದ್ಧಿ ಭವನ, ಐವಾನ ಎ-ಶಾಹಿ, ಕಲಬುರಗಿ-585102 ಗೆ ಕಳುಹಿಸಬೇಕು.

WEBSITE

_____________

Leave A Reply

Your email address will not be published.