HAVERI| ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ವಿವಿಧ ಉಚಿತ ಉದ್ಯೋಗ ತರಬೇತಿಗಳಿಗೆ ಅರ್ಜಿ ಆಹ್ವಾನ.!
ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿರುವ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್ಸೆಟಿಯಲ್ಲಿ ಜಿಲ್ಲೆಯ ನಿರೂದ್ಯೋಗಿ ಯುವಕ, ಯುವತಿಯರಿಗೆ ಜುಲೈ ಮಾಹೆಯಲ್ಲಿ ವಿವಿಧ ಉಚಿತ ತರಬೇತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 26 ರಿಂದ ಮಹಿಳಾ ಹೋಲಿಗೆ ತರಬೇತಿ 30 ದಿನ, ಜುಲೈ 30 ರಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಕುರಿ ಸಾಕಾಣಿಕೆ 10 ದಿನಗಳ ತರಬೇತಿ, ಜುಲೈ 23 ರಿಂದ 30 ದಿನಗಳ ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ (ಮಹಿಳೆಯರಿಗೆ ಮಾತ್ರ) ಹಾಗೂ 45 ದಿನಗಳ ಕಂಪ್ಯೂಟರ ಡಿಟಿಪಿ ತರಬೇತಿ ಆಯೋಜಿಸಲಾಗಿದೆ. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿಯೊಂದಿಗೆ ತರಬೇತಿ ಉಚಿತವಾಗಿ ನೀಡಲಾಗುವುದು.
ಅಭ್ಯರ್ಥಿಗಳು 18 ರಿಂದ 45 ವರ್ಷದವರಾಗಿರಬೇಕು. ಜಾತಿ ಮತ್ತು ಆದಾಯ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಶನ ಕಾರ್ಡ, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ..
ನಿರ್ದೇಶಕರು, ಬರೊಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ, ಹಾವೇರಿ (ಡಿ.ಸಿ.ಆಫೀಸ್ ಕಟ್ಟಡದ ಹಿಂಭಾಗ ದೇವಗಿರಿ) ಹಾವೇರಿ. ದೂರವಾಣಿ ಸಂಖ್ಯೆ 08375-296360, ಮೊ.7795286480/9110865650 (ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆ) ಸಂಪರ್ಕಿಸಬಹುದೆಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.