BESCOM Recruitment 2021| ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ – 2021.

0

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಇಂಜಿನಿಯರಿಂಗ್ ಪದವೀಧರರು ಅಥವಾ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

ಪದವೀಧರ ಅಪ್ರೆಂಟಿಸ್ 325 ಹುದ್ದೆಗಳು ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ 75 ಹುದ್ದೆಗಳು ಒಟ್ಟು ಹುದ್ದೆಗಳು: 400

ಉದ್ಯೋಗ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:

– ಪದವೀಧರ ಅಪ್ರೆಂಟಿಸ್ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿಯನ್ನು ಪಾಸಾಗಿರಬೇಕು

– ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ : ಅಂಗೀಕೃತ ಸಂಸ್ಥೆಯಿಂದ 3 ವರ್ಷಗಳ ಡಿಪ್ಲೊಮಾ ಪಾಲಿಟೆಕ್ನಿಕ್ ಕೋರ್ಸನ್ನು ಪಾಸಾಗಿರಬೇಕು.

INFOSYS ಕಂಪನಿಯಲ್ಲಿ ಉದ್ಯೋಗವಕಾಶ.! ಮಾಹಿತಿ ತಿಳಿಯಲು ಕ್ಲಿಕ್ ಮಾಡಿ.!

ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಅಪ್ರೆಂಟಿಸ್ ತರಬೇತಿಯು 1 ವರ್ಷದ ಅವಧಿಯದ್ದಾಗಿರುತ್ತದೆ.

 

ಬೆಸ್ಕಾಂಗೆ ಅಪ್ಲೈ ಮಾಡಲು ಕೊನೆಯ ದಿನಾಂಕ: 5 ಆಗಸ್ಟ್ 2021 ಆಯ್ಕೆ ಪಟ್ಟಿಯನ್ನು ಕಟಿಸುವ ದಿನಾಂಕ : 10 ಆಗಸ್ಟ್ 2021 ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ದಿನಾಂಕ : 16 ಅಗಸ್ಟ್ ರಿಂದ 18 ಆಗಸ್ಟ್ 2021ರವರೆಗೆ ನಡೆಸಲಾಗುವುದು.

ವೇತನ ಶ್ರೇಣಿ:

ಪದವೀಧರ ಅಪ್ರೆಂಟಿಸ್ : ಮಾಸಿಕ 7000 ರೂಪಾಯಿಗಳು

ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ : ಮಾಸಿಕ 5000
ರೂಪಾಯಿಗಳು.

ಪ್ರಮುಖ ದಿನಾಂಕಗಳು :

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 ಜುಲೈ 2021

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : 30 ಜುಲೈ 2021

WEBSITE

Leave A Reply

Your email address will not be published.