ಕೇಂದ್ರದಿಂದ ಭರ್ಜರಿ ನೇಮಕಾತಿ; 10th ಪಾಸಾದವರಿಗೆ 25271 ಹುದ್ದೆಗಳು.!
ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC GD Constable) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಎಸ್ಎಸ್ಬಿ, ಎಸ್ಎಸ್ಎಫ್, ಎನ್ಎಐಎ, ಐಟಿಬಿಪಿ ಪಡೆಗಳಲ್ಲಿ ಅಗತ್ಯ ಇರುವ ಜೆನೆರಲ್ ಡ್ಯೂಟಿ ಕಾನ್ಸ್ಟೇಬಲ್ಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಹುದ್ದೆಗಳ ವಿವರ
ಗಡಿ ಭದ್ರತಾ ಪಡೆ 7545
ಕೇಂದ್ರ ಕೈಗಾರಿಕಾ ಭದ್ರತಾ ಪಡೆ 8464
ಸಶಸ್ತ್ರ ಸೀಮಾ ಬಲ್ 3806
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ 1431
ಅಸ್ಸಾಂ ರೈಫಲ್ಸ್ 3785
ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್ 240
ಒಟ್ಟು ಹುದ್ದೆಗಳ ಸಂಖ್ಯೆ 25271
ವಿದ್ಯಾರ್ಹತೆ: 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ. ಗರಿಷ್ಠ ವಯೋಮಿತಿ: 23 ವರ್ಷ. ವಯೋಮಿತಿ ಸಡಿಲಿಕೆ ನಿಯಮಗಳು ವರ್ಗಾವಾರು ಅನ್ವಯವಾಗಲಿವೆ.
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.100. ಎಸ್ಸಿ/ಎಸ್ಟಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ನೆಟ್ಬ್ಯಾಂಕಿಂಗ್, ಎಸ್ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ವೇತನ ಶ್ರೇಣಿ
ರೂ . 21700/- ದಿಂದ ರೂ.69100/
ಆಯ್ಕೆ ವಿಧಾನ
ದೈಹಿಕ ತಾಳ್ವಿಕೆ ಪರೀಕ್ಷೆ, ದೇಹರ್ದಾಡ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ (ಗುಲ್ಬರ್ಗಾ), ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ,
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2021 ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 02-09-2021
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 04-09-2021
ಹೆಚ್ಚಿನ ಮಾಹಿತಿಗಾಗಿ WEBSITE ಮೇಲೆ ಕ್ಲಿಕ್ ಮಾಡಿ..